ಮಹಾ ಶಿವರಾತ್ರಿ ..

ಎಲ್ಲ ಕಡೆ ಪೂಜೆ ಪುನಸ್ಕಾರಗಳು, ಓಂ ನಮಃ ಶಿವಾಯದ ಜಾಪಗಳು, ಭಜನೆಗಳು !!
ತುಂಬಾ ಪುಣ್ಯ ದಿನ. ಇಂದು ಉಪವಾಸ ವ್ರತ ಮಾಡಿದರೆ ಪೂರ್ತಿ ವರುಷ ವ್ರತ ಮಾಡಿದಷ್ಟು ಪುಣ್ಯವಂತೆ. ಚಿಕ್ಕಂದಿನಿಂದ ಕೇಳಿದ ಕಥೆಗಳು ಸುಮಾರು, ಗುರು ಚರಿತ್ರೆಯಲ್ಲಿ ಅಭಾ ಅದೇನು ಕಥೆಗಳು - ಓದುತ್ತಿದ್ದರೆ ಮನಸ್ಸಿನಲ್ಲಿ ಒಂಥರಾ ಭಕ್ತಿ ಭಾವನೆ ಬರುವುದು. ನಮ್ಮನ್ನು ಒಂದು ಬೇರೆ ಲೋಕಕ್ಕೆ ಕರೆದೊಯ್ಯುವಂತ ಶಕ್ತಿ ಉಳ್ಳ ಕಥೆಗಳು ಅವು :))
ಪುರಾಣಗಳ ಪ್ರಕಾರ ಅನೇಕ ಕಥೆಗಳು ಶಿವರಾತ್ರಿಯ ಮಹಿಮೆಯನ್ನು ಹೇಳುತ್ತವೆ.
ಇಲ್ಲಿ ಎರಡು ಕಥೆಗಳನ್ನು ಇಟ್ಟಿದ್ದೇನೆ.
ಕಥೆ 1 -
ಒಂದು ಸರ್ತಿ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ವಾಗ್ವಾದ ನಡೆಯಿತು - ಯಾರು ಜಾಸ್ತಿ ಶ್ರೇಷ್ಠ ದೇವರು ಎಂದು.!!
ಇವರಿಬ್ಬರ ಜಗಳ ನೋಡಿ ಭಯಭೀತರಾದ ಬಾಕಿ ದೇವತೆಗಳು ಈಶ್ವರನ ಹತ್ತಿರ ಬೇಡಿದರು ದೇವ ನೀನೆ ಈ ಜಗಳವನ್ನು ಪರಿಹರಿಸೆಂದು.
ಆಗ ಈಶ್ವರನು ಇವರಿಬ್ಬರಿಗೆ ಅವರ ತಪ್ಪಿನ ಅರಿವು ಮಾಡಿಸಲು ಅಗ್ನಿ ಲಿಂಗದ ರೂಪ ತಾಲಿದನು. ಅದರ ತುದಿಯನ್ನು (ಒರಿಜಿನ್) ತಿಳಿಯಲು ಮತ್ತು ನಾನೇ ಅಧಿಕ ಅರ್ಹನೆಂದು ತೋರಿಸಿಕೊಳ್ಳಲು ಇಬ್ಬರು ನಿರ್ಧಾರ ಮಾಡಿದರು.
ಬ್ರಹ್ಮನು "ಹಂಸ" ರೂಪ ತಾಳಿ ಆಕಾಶದತ್ತ ಹಾರಿದನು. ವಿಷ್ಣು "ವರಾಹ" ರೂಪ ತಾಳಿ ಭೂಮಿ ಪ್ರವೇಶಿಸಿದನು. ಆದರೆ ಬೆಳಕಿಗೆ(ಪ್ರಕಾಶ - ಬೆಂಕಿಗೆ) ಎಲ್ಲಿ ಉಂಟು ಇತಿ ಮಿತಿ !!
ಅವರಿಗೆ ಅದರ ಕೊನೆಯೇ ಕಾಣಲಿಲ್ಲ. ಈ ಹುಡುಕಾಟದ ಸಮಯದಲ್ಲಿ ಬ್ರಹ್ಮನು ಕೇತಕಿ ಪುಷ್ಪವನ್ನು ನೋಡಿ ಕೇಳಿದ ನೀನು ಎಲ್ಲಿಂದ ಬಂದಿರುವೆ ? ಕೇತಕಿ ಉತ್ತರಿಸಿದಳು -
ನನ್ನನ್ನ ಲಿಂಗದ ಮೇಲೆ ಪೂಜೆಗೆಂದು ಅರ್ಪಿಸಲಾಗಿದೆ.! ಪಾಪ ಸುಸ್ತಾಗಿದ್ದ ಬ್ರಹ್ಮನು ಯೋಚಿಸಿದ ಹೇಗೂ ನನಗೆ
ನನ್ನನ್ನ ಲಿಂಗದ ಮೇಲೆ ಪೂಜೆಗೆಂದು ಅರ್ಪಿಸಲಾಗಿದೆ.! ಪಾಪ ಸುಸ್ತಾಗಿದ್ದ ಬ್ರಹ್ಮನು ಯೋಚಿಸಿದ ಹೇಗೂ ನನಗೆ
ಲಿಂಗದ ತುದಿಯು ಸಿಕ್ಕಿಲ್ಲ, ಆದರೆ ಮೇಲ್ಭಾಗಕ್ಕೆ ಕೆತಕಿಯನ್ನು ಅರ್ಪಿಸಿದ ಕಾರಣ ಈ ಹೂವನ್ನೇ ನನ್ನ ಸಾಕ್ಷಿ ಆಗಿಸಿ ಕರೆದೊಯ್ದರೆ ಹೇಗೆ ಎಂದು.
ಇದು ಈಶ್ವರನಿಗೆ ಗೊತ್ತಾಗಿ ಅವನ ನಿಜ ರೂಪದಲ್ಲಿ ಬಂದು ಬ್ರಹ್ಮನಿಗೆ ಶಾಪ ಕೊಟ್ಟನು - ನೀನು ಸುಳ್ಳು ಹೇಳಿದ್ದಕ್ಕೆ ನಿನ್ನನ್ನು ಯಾರು ಪೂಜಿಸುವುದಿಲ್ಲ ಮತ್ತು ಸುಳ್ಳು ಸಾಕ್ಷಿ ಹೇಳಿದಕ್ಕೆ ಕೇತಕಿ ಪುಷ್ಪವು ಇನ್ನು ಮೇಲೆ ಯಾವುದೇ ಪೂಜೆಯಲ್ಲಿ ಅರ್ಪಿಸಲು ಅರ್ಹಳಲ್ಲ ಎಂದು.

**--------**--------**-----------**-------------**-----------**-------------**--------**
ಕಥೆ 2 -
ಒಂದು ಊರಲ್ಲಿ ಒಬ್ಬ ಬಡವನಿದ್ದ. ಆತನು ಈಶ್ವರನ ಪರಮ ಭಕ್ತಾ.

ಒಂದು ದಿನ ಆತ ಸೌದೆ ತರಲು ಕಾಡಿಗೆ ಹೋದನು. ತುಂಬಾ ಒಳಗೆ ಹೋದ ಕಾರಣ ಅವನು ದಾರಿ ತಪ್ಪಿದ. ಬಹಳ ರಾತ್ರಿ ಆಗಿತ್ತು. ಮನೆಗೆ ಹಿಂದಿರುಗಲು ದಾರಿ ಗೊತ್ತಾಗಲ್ಲಿಲ. ಕಾಡು ಪ್ರಾಣಿಗಳ ಶಬ್ದ ಕೇಳಿ ಭಯ ಆಯಿತು. ಹಾಗಾಗಿ ರಾತ್ರಿ ಕಳೆಯಲು ಒಂದು ಮರದ ಕೊಂಬೆಯನ್ನು ಹತ್ತಿ ಕುಳಿತ. ಕೊಂಬೆಗಳ ನಡುವೆ ಕುಳಿತ ಅವನಿಗೆ ಭಯ ಕಾಡಿತು, ನಿದ್ರೆ ಬಂದು ಬಿದ್ದು ಬಿಟ್ಟರೆ ಏನು ಗತಿ ಎಂದು. ಎಚ್ಚರವಾಗಿರಲು ಅವನು ಒಂದು ಉಪಾಯ ಮಾಡಿದ - ರಾತ್ರಿಯೆಲ್ಲ ಈಶ್ವರನ ಸ್ಮರಣೆ ಮಾಡುತ್ತಾ ಕೊಂಬೆಯ ಎಲೆಗಳನ್ನು ಕಿತ್ತು ಕೆಳಗೆ ಹಾಕತೊಡಗಿದ. ಬೆಳಗಾದಾಗ ಅವನು ಕೆಳಗೆ ನೋಡಿದ - ಅವಾಗ ಅವನಿಗೆ ಅರಿವಾಇತು ರಾತ್ರಿಯೆಲ್ಲಾ ಎಲೆಗಳನ್ನು ಕಿತ್ತು ಹಾಕಿದ್ದು ಬೆಳಗಾಗೊವಷ್ಟರಲ್ಲಿ ಒಂದು ಸಾವಿರ ಎಲೆಗಳ ಲೆಕ್ಕ ದಾಟಿತ್ತು :) ಮತ್ತು ಆ ಎಲೆಗಳು ಒಂದು ಈಶ್ವರ ಲಿಂಗದ ಮೇಲೆ ಬಿದ್ದಿದ್ದವು :))

ಅವನಿಗೆ ಅರಿವಿರಲಿಲ್ಲ ಆ ಮರವು ಬಿಲ್ವ ಮರಾ ಎಂದು.
ಈ ರೀತಿ ರಾತ್ರಿಯೆಲ್ಲಾ ಉಪವಾಸವಿದ್ದು ಈಶ್ವರನ ಸ್ಮರಿಸುತ್ತ ಬಿಲ್ವ ಪತ್ರೆ ಇಂದ ಪೂಜೆ ಸಲ್ಲಿಸಿದ ಕಾರಣ ಈಶ್ವರನಿಗೆ ಬಹಳ ಸಂತೋಷವಾಯಿತು.
ಖುಷಿಯಿಂದ ವರದಾನ ಕೊಟ್ಟನು. ಈ ಕಥೆಯನ್ನು ಶಿವರಾತ್ರಿಯ ದಿನ ಪಟಿಸುತ್ತಾರೆ.ಮಹಾ ಶಿವರಾತ್ರಿಯು ಜ್ಞಾನದ ಜ್ಯೋತಿ ಬೆಳಗಿಸಿ ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳುವ ವಿಧಾನ ಕಲಿಸುತ್ತದೆ.
ಚುಮು ಚುಮು ಚಳಿಯ ಕಾಲ ಮುಗಿದು ಬೇಸಿಗೆಯ ಆರಂಭ ಸೂಚಿಸುತ್ತದೆ ಶಿವರಾತ್ರಿ :))
ಹೌದು -
ಚಳಿ ಚಳಿ ಅಂದಾಗ ನೆನಪಾಯಿತು -
ಚಳಿಯು ಶಿವ ಶಿವಾ ಎಂದು ನಮ್ಮನ್ನ ಬಿಡುವ ಹಾಗೆ ನಾವು ಎನನ್ನು ಬಿಡ್ತಾ ಇದ್ದೇವೆ ಶಿವನ ಹೆಸರಲ್ಲಿ ??
ಏನಾದರೂ ಒಂದು ದುರಭ್ಯಾಸವೇ ಇರಬಹುದಲ್ಲವೇ !!
Comments