Posts

Showing posts with the label ಒಳ್ಳೆಯ ಕ್ಷಣಗಳು

"ಅಕ್ಕಿ ರೊಟ್ಟಿ ಮತ್ತೂ ನಿಂಬು ಶರಬತ್ "..

ನನಗೆ ತುಂಬಾನೇ ಇಷ್ಟವಾದ ತಿಂಡಿಗಳಲ್ಲಿ ಒಂದು - ಮೊಗೆಕಾಯಿ ಮತ್ತು ಅಕ್ಕಿ ಹಿಟ್ಟಿನ ರೊಟ್ಟಿ .. ಊರಿಗೆ ಹೋದಾಗ ಯಾವಾಗಲು ಎದುರು ನೋಡುತ್ತಿದ್ದ ಗಳಿಗೆ ಅಂದರೆ ಅಜ್ಜಮ್ಮ ನನ್ನ ಅಕ್ಕರೆಯಿಂದ ಕರೆಯೋದು - ಮಗಳೇ ಬಾ ಅಕ್ಕಿ ರೊಟ್ಟಿ ಇಟ್ಟಿದ್ದೆ ನಿಂಗೆ ಹೇಳಿ, ಅಲ್ಲೇ ನಿಂಬು ಶರಬತ್ ಕೂಡಾ ಇದ್ದು ನೋಡು ಕುಡಿಯಲೇ ಮರಿಯಡ ಮತ್ತೆ ಅಡ್ಡಿಲ್ಯ :)) ಅಕ್ಕಿ ರೊಟ್ಟಿ ಅಂದ್ರೆ ನನಗೋ ಪ್ರಾಣ. ಅದರ ಜೊತೆ ಕಾಯಿ ಚಟ್ನೀ, ಬೆಲ್ಲ ತುಪ್ಪ, ಅಲ್ಲ ಚಟ್ನಿ ಪುಡಿ ಎಣ್ಣೆ ಹಚ್ಹ್ಕಂಡು ತಿಂದ್ರಂತು ಏನ್ ಸ್ವಾದಾ  :)  ಅದೇನು ಕೈ ರುಚಿಯೋ ಅಜ್ಜಮ್ಮಂದು ಮಾತ್ರಾ.. ಊರಿಗೆ ಹೋದ್ರೆ ಅಲ್ಲಿಯ ನನ್ನ ಮನೇಯವ್ರಿಗೆ ನಾನು ಅಲ್ಲಿ ಹೋಗಿದ್ದೆ ಹಬ್ಬ. ಕಾರಣ - ನನ್ನ  ಕಪಿಚೆಷ್ಟೆಗಳು, ಕಸಿನ್ಸ್ ಯೆಲಾರ್ನು ಕೂರ್ಸ್ಕೊಂದು ಇಸ್ಪೀಟಿನ ಆಟಗಳು, ಕಣ್ಣಾ ಮುಚಾಲೆ ಆಟ, ಮರಕೋತಿ ಆಟ, ಚೆನ್ನಾ ಮನ್ನೀ ಆಟ, ಗದ್ದೆಗಳಲ್ಲಿ ಮನೆಯಲ್ಲಿ ಎಲ್ಲಕಡೆ ನಮ್ಮ ರಾಧಾನ್ತಗಳು ಒಂದಾ ಎರಡಾ. ಇಡಿ ದಿನ ಆಟಾ ಆಟಾ :) ನಾನು ಹುಟ್ಟಿದ್ದು ಒಂದು ಸುಂದರವಾದ ಹವ್ಯಕ ಬ್ರಾಹ್ಮಣರ ಮನೆಯಲ್ಲಿ. ಹಳ್ಳಿ ವಾತಾವರಣ, ಹಸಿರು ಪ್ರದೇಶ, ತೋಟ ಗದ್ದೆಗಳು, ಎತ್ತಿನ ಗಾಡಿಗಳು,...