ಅಮ್ಮಾ ನಿನ್ನ ಯೆದೆಯಾಳದಲ್ಲಿ . . . . !!


ಆಫಿಸಿನಿಂದ ಮನೆಗೆ ವಾಪಸ ಹೋಗಬೇಕಾದ್ರೆ fm ಕೇಳುತ್ತ ಹೊರಟಿದ್ದೆ.. ಮ್.ಡಿ.ಪಲ್ಲವಿ ಹಾಡುತ್ತಿದರು -

"ಅಮ್ಮ ನಿನ್ನ ಯೆದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತಿರುವೆ ನಾನು,
ಕಡಿಯಲೋಲ್ಲೇ ನೀ ಕರುಳ ಬಳ್ಳಿ, ಒಳವೂಡುತಿರುವಾ ತಾಯೆ, ಬಿಡದ ಭುವಿಯ ಮಾಯೆ,
ನಿನ್ನಾ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನಾ ? ದೂಡು ಹೊರಗೆ ನನ್ನಾ ..

ಹೌದೆನಿಸಿತು.. ಇವಳ ಪ್ರಸ್ತುತ ಪರಿಸ್ಥಿತಿಯು ಹೀಗೆಯೇ ಸ್ವಲ್ಪ ..

ಇವಳ ಹೆಸರು ಶ್ರಾವ್ಯಾ .. ಪ್ರತಿಷ್ಟಿತ ಕಂಪನಿ ಒಂದರಲ್ಲಿ ಒಳ್ಳೆಯ ಹುದ್ದೆಯಲ್ಲಿ ಕೆಲಸ, ವಾರಕ್ಕೆ ಎರಡು ದಿನ ರಜೆ, ನೋಡಲು ಐಶ್ವರ್ಯ ರೈ ಅಲ್ಲದೆ ಇದ್ದರು ಹುಡುಗರು ಇಷ್ಟಾ ಪಡುವಂತಹ ಮುಖ ಕಳೆ, ಬಾಯಿ ತುಂಬಾ ಮಾತು-ಹರಟೆ, ಹೆಸರಿಗೆ ತಕ್ಕಂತೆ ಸುಶ್ರಾವ್ಯವಾದ ಕಂಠ  :)

ಇಷ್ಟೇ ಆಗಿದ್ದರೆ ತಲೆನೋವೇ ಇರಲಿಲ್ಲ ಆಲ್ವಾ .. ಇಷ್ತೆಲ್ಲರ ಜೊತೆಗೆ ಆ ಭಗವಂತ ಇವಳಿಗೆ ಮದುವೆಯ ವಯಸ್ಸನ್ನು ಕೂಡಾ ಕೊಟ್ಟಿದ್ದ :( .. ಅರೆ ಇದರಲ್ಲಿ ತೊಂದರೆ ಏನು ಅಂತ ಕೇಳ್ತಿರಾ !!ಬದುಕಿನುದ್ದಕ್ಕೂ ನಾವು ಯಾವ ಯಾವುದೋ ವಿಷಯಕ್ಕೆ ಅರ್ಥ ಹುಡುಕುತ್ತೇವೆ .. ಹೌದಾ .. ಆದರೆ ಇವಳು ಈ  ಅರ್ಥ ಅನರ್ಥಗಳನ್ನು ಬಿಟ್ಟು ಹುಡುಕುತ್ತಿರುವುದು "ಇವಳ ಮದುವೆ ಆಗುವ ಆ ಪುಣ್ಯಾತ್ಮನನ್ನ" :p

ಅವಳು ಅಂದುಕೊಂಡಳು ಅಯ್ಯಯ್ಯೋ ದ್ಯಾವ್ರೆ ಇದೆಂಥ  ಕಷ್ಟಾ ಕೊಟ್ಯಪ್ಪಾ - ನಾನೇನು ಪಾಪಾ ಮಾಡಿದ್ದೆ .? ಮಾತ್ತೊಬ್ಬರಿಗೆ ಕೇಡು ಬಯಸುವ ಜಾಯಮಾನ ಅಂತು ಅಲ್ಲವೇ ಅಲ್ಲ  - ಮತ್ತದೇಕೆ ಈ ಶಿಕ್ಷೆ  ? ಈ ಲೈನ್ ನೋಡಿ ನೀವು ಇವಳನ್ನಾ ಡ್ರಾಮಾ ರಾಣಿ  ಅಂದುಕೊದಿರ್ತಿರಾ :p

ಸಾಮಾನ್ಯವಾಗಿ ನಮ್ಮ ಕಡೆ ಹೆಣ್ಣುಮಕ್ಕಳ ಮದುವೆಯನ್ನ ಚಿಕ್ಕ ವಯಸ್ಸಿನಲ್ಲೇ ಮಾಡಿಬಿಡುತ್ತಾರೆ ..
ಅದೇ ಶಹರುಗಳಲ್ಲಿ ಆಧುನಿಕತೆ ಮತ್ತು ಶಿಕ್ಷಣದ ಹೆಸರಿನಲ್ಲಿ ತಡವಾಗಿ ಮದುವೆ ಮಾಡುವ ಟ್ರೆಂಡು ಶುರುವಾಯಿತು .. ಅದೇ ಆದರ್ಶವನ್ನು ಇಟ್ಟುಕೊಂಡು ಇವಳ ಅಪ್ಪಾ ದಿ ಗ್ರೇಟ್ ಕೂಡ ಹೇಳಿದರು - ಮಗಳು ಓದಲಿ, ಡಿಗ್ರಿ ಮುಗಿದ ಮೇಲೆಯೇ ಜಾತಕ ಹೊರಗೆ ಹಾಕೋಣವೆಂದು ..

ಮಾಸ್ಟರ್ಸ್ ಡಿಗ್ರಿ ಮಾಡಬೇಕಾದರೆ ಕೆಲವು ಜಾತಕಗಳು ಬಂದವು ನಮ್ಮ ಮಗ ಹೊರದೇಶದಲ್ಲಿ ಇದಾನೆ ಮದುವೆ ಮಾಡಿ ಕೊಡುತ್ತೀರಾ ಅಂತ ಕೇಳಿದರು. ಅದಕ್ಕೆ ಅಪ್ಪಾ ಹೇಳಿದರು - ಇಲ್ಲ ಸ್ವಾಮಿ ನಮಗೆ ಈವಾಗಲೇ ಮಗಳ ಮದುವೆ ಮಾಡೋ ಯೋಚನೆ ಇಲ್ಲ. ಅವಳು ಇನ್ನು ಓದುತ್ತಿದ್ದಾಳೆ .. ಇನ್ನೆರಡು ವರುಷ ಆದಮೇಲೆ ನೋಡುತ್ತೇವೆ ಎಂದು ಫೋನ್ ಇಟ್ಟಿದ್ದರು ..ಅಪ್ಪನಿಗೆ ಮಗಳ ಓದು ಮುಖ್ಯವಾಗಿತ್ತು ..

ಮಗಳು ನಾಲ್ಕು ಅಕ್ಷರಾ ಓದಲಿ, ಒಳ್ಳೆಯ ಕೆಲಸದಲ್ಲಿ ಸೇರಲಿ, ಒಳ್ಳೆ ಸಾಧನೆಯನ್ನ ಮಾಡಲಿ etc etc .. ಅಪ್ಪನ ಪ್ರಕಾರ ಕೆ.ಎಸ.ನರಸಿಂಹ ಸ್ವಾಮಿ ಬರೆದ ಗೀತೆ - ಶಾನುಭೋಗರ ಮಗಳು - ಅದರಲ್ಲಿ ಹೇಳಿದ್ದು ಸರಿಯಾಗೇ ಇದೆ - ಮಗಳು ಸಭ್ಯ ಹುಡುಗಿ, ಒಳ್ಳೆಯ ಮನೆ ಸೇರಲಿ - ತಡವಾದರೆನಂತೆ ನಷ್ಟವಿಲ್ಲ :)

ಅಲ್ಲಿಗೆ ಮಾತು ಮುಗಿಯಿತಾ ?? ಅವರಿಗೆ ಅರಿವಿಲ್ಲದೆಯೇ ಶುರುವಾಗಿತ್ತು ಇನ್ನೊಂದು ಸಮಸ್ಯೆ .. ಇವರ ಕನಸಿನ ಸಾರ್ಥಕತೆಯನ್ನು ನೋಡುವ  ಸಮಾಧಾನ ಮಗಳ ವಯಸ್ಸಿಗೆ ಇರಲ್ಲಿಲವೇ !!
ಮಗಳಿಗೆ  ಅವಾಗಾ ೨೩ ವಯಸ್ಸು. ಆಟವಾಡಿಕೊಂಡು ಓಡಾಡಿಕೊಂಡು ಇದಾವುದರ ಟೆನ್ಶನ್ ಇಲ್ಲದೆ ಇದ್ದಳು ..
ಆಮೇಲೆ ಜಾತಕ ಹೊರಹಾಕಿದಾಗ ಶುರುವಾಯಿತು ನೋಡಿ ವಧು ಪರೀಕ್ಷೆಗಳು ವರಾನ್ವೇಷಣೆಗಳು ಇತ್ಯಾದಿ ಇತ್ಯಾದಿ .. ಅಭಾ ಸುಮ್ಮನೆ ಅಲ್ಲ ಹೇಳುವುದು ಮನೆ ಕಟ್ಟಿ ನೋಡಿ ಮಾಡುವೆ ಮಾಡಿ ನೋಡಿ ಎಂದು..

ಈಗ  ಶ್ರಾವ್ಯಳಿಗೆ  ೨೬ .. ಬಂದ ಗಂಡುಗಳು ಮತ್ತು ಅವರ ಹೆತ್ತವರು ನೂರಾ ಎಂಟು ಶರತ್ತುಗಳನ್ನಿಟ್ಟರು .. ಅರೆ ಹೆಣ್ಣು ಬೇಕಾ ತರಕಾರಿಯಾ  ??
ಅಪ್ಪ ಅಮ್ಮನಿಗೆ ಯೋಚನೆ ಶುರುವಾಯಿತು - ಜಾತಕಗಳು ಹೊಂದುತ್ತಿಲ್ಲ, ಸಗೊತ್ರ ಮದುವೆ ಮಾದಲಾಗುವುದಿಲ್ಲ, ಗಂಡಿನ ಕಡೆಯವರಿಗೆ ಬಿ.ಈ ಮತ್ತು ಎಂ.ಬಿ.ಏ ಹುಡುಗಿ ನೆ ಬೇಕಂತೆ .. ಮಗಳು ಮಾಡಿರುವ ಡಬಲ್ ಡಿಗ್ರಿ ಲೆಕ್ಕಕ್ಕೆ ಇಲ್ಲದಂತೆ ವರ್ತಿಸುತ್ತಾರಲ್ಲ.. ಹೀಗೆ ಆದರೆ ಏನು ಕಥೆ.??

ಉತ್ತರ ಪರಿಹಾರ ?? ತೀರ್ಥ ಸ್ಥಳಗಳ  ಪ್ರದಕ್ಷಿಣೆಗಳು  :)
ಮನೆ ತುಂಬಾ ಮಂತ್ರಾಕ್ಷತೆ, ಪ್ರಸಾದ ಪೊಟ್ಟಣಗಳು, ಬೇರೆ ಬೇರೆ ದೇವಸ್ಥಾನಗಳ ಬ್ರೋಶರುಗಳು, ಪೂಜೆ ಪುನಸ್ಕಾರಗಳು, ವ್ರತಗಳು ಅಯ್ಯೋ ಒಂದಾ ಎರಡಾ ..

ಅವರಿಗೆ ಏಕೆ ಅರ್ಥಾ ಆಗುವುದಿಲ್ಲ .. ಮದುವೆ ಅನ್ನುವುದು ಹಣೆಬರಹದ ವಿಷಯ. ಅದು ಭಗವಂತ ಯಾವಾಗಲೋ ಬರೆದು ಆಗಿದೆ. ಕೆಲವರಿಗೆ  ಕಂಕಣಬಲ ಬೇಗ ಕೂಡುತ್ತದೆ ಇನ್ನು ಕೆಲವರಿಗೆ ಜೀವನವನ್ನ ಸಿಂಗಲ್ ಆಗಿ ನೋಡುವ ಸಮಯ ಜಾಸ್ತಿ ಇರುತ್ತದೆ :)

ಕರುಳ ಬಳ್ಳಿ ಬಿಡಲೊಲ್ಲದು - ಆದರೆ ಏನು ಮಾಡುವುದು - ಹೆಣ್ಣು ಮಗಳ ಹಣೆಬರಹವೇ ಇಷ್ಟು ಅಲ್ಲವಾ .. ಒಂದು ವಯಸ್ಸಿನಲ್ಲಿ ಅಷ್ಟು ವರುಷ ಬೆಳೆದು ಬಂದ ಮನೆ, ಅಪ್ಪಾ ಅಮ್ಮನ ಪ್ರೀತಿ, ತಂಗಿಯಾ ಜೊತೆಗಿನ ಸ್ನೇಹ ಆಟ ಪಾಟಗಳನ್ನೆಲ್ಲ ಬಿಟ್ಟು ಹೊರಡಲೇ ಬೇಕು ..

ಅಮ್ಮನಿಗೆ ಮಗಳು ಜೊತೆಯಲ್ಲಿ ಇರುವಷ್ಟು ದಿನ ಇರಲಿ ಎಂಬ ಆಸೆ ಏನೋ ಇದೆ ಆದರೆ ಒಳ್ಳೆಯ ಮನೆ ಸೇರಲಿ ಆತುರದಲ್ಲಿ ಕಾಲು ಜಾರುವುದು ಬೇಡವೆನ್ನೋ ಆಲೋಚನೆ ಕೂಡ ಇದೆ. ಹಾಗಂತಾ ಜಾಸ್ತಿ ದಿನವಾದರೆ ವಯಸ್ಸು ಸಮಸ್ಯೆಯಾಗುತ್ತದೆ ಆಮೇಲೆ. ಇದೆ ನೋಡಿ ದಿನ ನಿತ್ಯದ ಸೀನು ಮನೆಯಲ್ಲಿ ಈಗ :)


ಕರುಳ ಕುಡಿ ಸುಖವಾಗಿದ್ದಾಳೆ, ಅಪ್ಪಾ ಅಮ್ಮನ ಪ್ರೀತಿಯನ್ನು ಮರೆಸುವಂತಹ ಗಂಡಾ ಸಿಕ್ಕಿದ್ದಾನೆ ಅಂದರೆ ಅದಕ್ಕಿಂತ ಕುಷಿ ಏನು ಹೆತ್ತವರಿಗೆ !! .. ಆಲ್ವಾ :)

ನಿಮ್ಮ ಶ್ರಾವ್ಯಳಿಗೆ ಒಂದು ಸ್ಮಾರ್ಟ್, ಟಾಲ್, ವೆಲ್ ಸೆಟ್ ಲ್ಡ್, ಮತ್ತು ಹೆಂಡತಿಯ ಬೇಕು ಬೇಡಗಳನ್ನ ಅರ್ಥಾ ಮಾಡಿಕೊಳ್ಳುವಂತಹ ಯೋಗ್ಯ ವರ ಬೇಕಿದ್ದಾನೆ :))
ನಿಮ್ಮ ಆಶೀರ್ವಾದಾ ಸದಾ ಇರಲಿ ..

Comments

Unknown said…
Superb!!! i don't have any more words to comment.

Popular posts from this blog

They say - some relations come with only a certain span of lifetime....after which they are just not there but you have ther swt memories :)

"ಅಕ್ಕಿ ರೊಟ್ಟಿ ಮತ್ತೂ ನಿಂಬು ಶರಬತ್ "..