ಹೀಗೆ ಒಂದು ಯೋಚನೆಯ ಸಂಜೆ . . . .

ಅದೆಷ್ಟೋ ಸರ್ತಿ ಅಂದುಕೊಂಡಿದ್ದು ಉಂಟು ಬ್ಲಾಗ್ ಅನ್ನು ಬರೆಯ ಬೇಕೆಂದು, ಆದರೆ ಅದೇನೋ ತಳಮಲಾ ಅದೇನೋ ಗೊಂದಲ ಅದೇನೇನೋ ಯೋಚನೆಗಳು - ಸರಿಯಾಗಿ ಏನೆಂದು ತಿಳಿಯಲಿಲ್ಲ. ಬಹಳಷ್ಟು ಸರಿ ಯೋಚಿಸಿದ್ದು ಇದೆ ಏನಿರಬಹುದು ಇ ಮನಸ್ಸಿನ ವಿಚಲಿತ ಭಾವದ ಕಾರಣ ಎಂದು ?
ಜೀವನ ಮತ್ತು ಅದರ ಏರು ಪೇರುಗಳು ಒಂದು ವ್ಯಕ್ತಿಯನ್ನು ತುಂಬಾ ಬದಲಾಯಿಸಿಬಿಡುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಆತನು ಒಂದು ದಿನ ಅವನ ಜೀವನ ಪುಟಗಳನ್ನೂ ತಿರುವಿ ನೋಡಿದಾಗ ಅವನಿಗೆ ಆಶ್ಚರ್ಯವಾಗುತ್ತದೆ ಆಗಿನ ನನಗೂ ಈವಾಗಿನ ನನಗು ಎಷ್ಟು ವ್ಯತ್ಯಾಸ ಅಂತ.!!
ಜೀವನದ ರೀತಿ ನೀತಿಗಳು ಬಲು ವಿಚಿತ್ರ ಅಲ್ಲವೇ. ನಾವು ಅಂದುಕೊಳ್ಳುವುದು ಒಂದು ಆಗುವುದು ಒಂದು. ಇದು ಸ್ವಂತ ಅನುಭವದ ಮಾತು. "ಆಗುವುದೆಲ್ಲ ಒಳ್ಳೆಯದಕ್ಕೆ" ಅನ್ನೋ ಅನುಭವದ ಮಾತು. :)
ಅಲ್ಲವೇ ಮತ್ತೆ !!
ನಮ್ಮ ಹುಟ್ಟು, ಬಾಲ್ಯ, ಯೌವನ, ಮುಪ್ಪು ಹೀಗೆ ಬೇರೆ ಬೇರೆ ಹಂತಗಳು.
ಪ್ರತಿ ಹಂತದಲ್ಲಿ ಹಾಗು ದಿನನಿತ್ಯದ ಕಾರ್ಯಕ್ರಮಗಳಲ್ಲಿ ಎಷ್ಟೊಂದು ವಿಷಯಗಳು ಇವೆ ಕಲಿಯುವುದಕ್ಕೆ. ಹೊಸ ದಿನ, ಹೊಸ ಕಲಿಕೆ, ಹೊಸ ಜನರ ಪರಿಚಯ, ಹೊಸ ಅನುಭವಗಳು ಹೀಗೆ ತುಂಬಾ ವಿಷಯಗಳು ಜೀವನ ಸಾಗಿಸಲಿಕ್ಕೆ. ಇದೆಲ್ಲ ಯೋಚಿಸಿದಾಗ ಅನಿಸುವುದು ಜೀವನ ಎಷ್ಟು ಚಿಕ್ಕದು. ತಿಳಿದುಕೊಳ್ಳುವುದಕ್ಕೆ ಸಾಧಿಸುವುದಕ್ಕೆ ಇನ್ನು ಬೇಕಾದಷ್ಟು ಇದೆ ಅಲ್ಲವೇ.
ಈ ಜಿಗಿ ಜಿಗಿಯ ದಿನಗಳಲ್ಲಿ ನಾವು ಅನಗತ್ಯ ವಿಚಾರಗಳಿಗಾಗಿ ತುಂಬಾ ಸಮಯ ವ್ಯರ್ಥ ಮಾಡುತ್ತಿದ್ದೇವೆ ಎಂದು ಅನಿಸಿತು. ಮೂರು ಹೊತ್ತು ಆಫಿಸಿನಲ್ಲಿ ಕುಳಿತು ಕಡಿಯುವುದಾದರು ಎಂತದು. ದೇಹ ಕಾಪಾಡಲು ಬಟ್ಟೆ, ಊಟ ತಿಂಡಿಗಳು, ತಲೆ ಮೇಲೆ ಒಂದು ಸೂರು. ಇಷ್ಟಕ್ಕೊಸ್ಕರ ಅದೆಷ್ಟು ಪರದಾಟ.
ಒಳ್ಳೆಯ ಉದ್ಯೋಗ ಬೇಕು, ಬ್ರಾಂಡ್ ಬಟ್ಟೆಗಳೇ ಬೇಕು, ಆರಾಮಿನ ಜೀವನ, ಹೀಗೆ ಕಮಿತ್ಮೆಂತುಗಳು ನಮ್ಮನ್ನ ವಿಶ್ರನ್ತಿಸಲು ಸಮಯ ಕೊಡುವುದು ಹೇಗೆ.?
ಇದೆಲ್ಲದರ ಮಧ್ಯೆ ನಾವು ನಮ್ಮ ಹವ್ಯಾಸ ಇಷ್ಟಗಲ್ಲನ್ನ ಎಷ್ಟರ ಮಟ್ಟಿಗೆ ಪೋಷಿಸುತ್ತಿದೇವೆ.
ನಾವು ಕಷ್ಟ ಪಡುವುದಕ್ಕೆ ನಮ್ಮ ಹುಟ್ಟಿಗೆ ಒಂದು ಅರ್ಥವನ್ನು ಹುಡುಕಿಕೊಂಡು ಹೊರಟಿದ್ದೇನೆ.!!
ಪ್ರಶ್ನೆಗಳು ಸುಮಾರು - ಅದರ ಉತ್ತರಗಳು ನಮ್ಮ ಹತ್ತಿರವೇ ಇದೆಯೆಂದು ಅನಿಸಿತು. ಯೋಚಿಸುವಂತಹ ವಿಷಯ ಅಲ್ಲವೇ..

Comments

Popular posts from this blog