ಯುಗಾದಿ . .

"ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ,
     ಹೊಸ ಹರುಷದಿ ಹೊಸ ವರುಷದಿ ಹೊಸದು ಹೊಸದು ತರುತಿದೆ"
ಒಂದು ಸುಂದರವಾದ ಗೀತೆ. ಬಹು ಅರ್ಥಪೂರ್ಣ ಕೂಡ. ಬೇವು ಬೆಲ್ಲ ತಿನ್ನಿರಿ ಸಿಹಿಯನ್ನು ಹಂಚಿರಿ.
ಪ್ರತಿ ಹೊಸ ವರುಷವು ಒಂದು ಹೊಸ ಹುರುಪನ್ನು, ಹೊಸದಾದ ಒಂದು ಅಪೇಕ್ಷೆಯನ್ನು ಕೊಡುತ್ತದೆ. ಹಳೆ ಜನ, ಹಳೆ ಬೇರು, ಹಳೆ ಸಂಸ್ಕೃತಿ, ಹೊಸ ಚಿಗುರಿನ ಜೊತೆಯಲ್ಲಿ ಹೊಸ ಚೈತನ್ಯ, ಎಲ್ಲ ಸೇರಿ ನಮಗೆ ಕೂಡಿ ಬಾಳುವ ಸಂದೇಶವನ್ನು ನೀಡುತ್ತವೆ. ಬೇವು ಅಂದರೆ ಕಹಿ ನೆನಪನ್ನು ಮರೆತು - ಬೆಲ್ಲ ಅಂದರೆ ಸಿಹಿ ಮಾತನ್ನು ಆಡಿರಿ, ಯಾರನ್ನು ನೋಯಿಸದಿರಿ ಎಂದು ಅರ್ಥ.
ಈ ದಿನ ಬೇವಿನ ಸೊಪ್ಪು ಮತ್ತು ಬೆಲ್ಲದ ಮಿಶ್ರಣವನ್ನು ತಿನ್ನುವುದು ರೂಡಿ.
ಎಲ್ಲ ಕಡೆ ಸಂಭ್ರಮ, ಹಬ್ಬದ ವಾತಾವರಣ - ಆಹಾ ಅದೇನು ಚಂದ. ಬಾಗಿಲಿಗೆ ಹಸಿರು ಮಾವಿನ ಎಳೆಯ ತೋರಣ, ಹೂವಿನ ಅಲಂಕಾರ, ಸಿಹಿ ತಿನಿಸುಗಳು, ತಂಪು ಪಾನೀಯಗಳು, ಎಲ್ಲರೂ ಹೊಸ ಬಟ್ಟೆ ತೊಟ್ಟು ಪೂಜೆ ಪುನಸ್ಕಾರಗಳನ್ನು ಮಾಡುವುದು ನೋಡುವುದೇ ಒಂದು ಆನಂದ ಅಲ್ಲವೇ.. ಈ ಹಬ್ಬಗಳು ಅಂದರೆ ಏನೋ ಸಂತೋಷ ಅಲ್ವ !!
ಪ್ರತೀ ಹಬ್ಬವು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.
"ಎಲ್ಲರಿಗೂ ವಿಕ್ರುತಿನಾಮ ಸಂವತ್ಸರದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು"..

Comments

Popular posts from this blog